Trump Tariffs: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 24 ಗಂಟೆಗಳಲ್ಲಿ ಜಾಗತಿಕ ಸುಂಕಗಳನ್ನು 2 ಬಾರಿ ಹೆಚ್ಚಿಸಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಸುಂಕ ನೀತಿಯನ್ನು ಕಾನೂನುಬಾಹಿರವೆಂದು ತೀರ್ಪು ನೀಡಿ ಅವುಗಳನ್ನು ರದ್ದುಗೊಳಿಸಿತ್ತು. ಇದಾದ ನಂತರ ಟ್ರಂಪ್ ಜಾಗತಿಕ ಸುಂಕಗಳನ್ನು ಶೇ.10 ಕ್ಕೆ ನಿಗದಿ ಮಾಡಿದ್ದರೆ. ಇದಾದ 24 ಗಂಟೆಗೂ ಮೊದಲೇ ಜಾಗತಿಕ ಸುಂಕಗಳನ್ನು 10% ರಿಂದ 15% ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ಸುಂಕವನ್ನು (Global Tariff) ಶೇ. 10 ರಿಂದ ಶೇ.15 ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಕೇವಲ 24 ಗಂಟೆಗಳಲ್ಲಿ ಎರಡನೇ ಬಾರಿ ಶಾಖ್ ನೀಡಿದ್ದಾರೆ. ಇದಕ್ಕೂ ಮೊದಲು, ಅಮೆರಿಕದ ಸುಪ್ರೀಂ ಕೋರ್ಟ್ ಹೆಚ್ಚುವರಿ ಸುಂಕವನ್ನು ಕಾನೂನುಬಾಹಿರ ಎಂದು ರದ್ದುಗೊಳಿಸಿತ್ತು. ಇದಾದ ನಂತರ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಆಮದುಗಳ ಮೇಲೆ ಶೇ.10 ರಷ್ಟು ಸುಂಕವನ್ನು ವಿಧಿಸಿದ್ದರು. ಇದೀಗ ಈ ಸಂಖವನ್ನು ಮತ್ತೆ ಏರಿಕೆ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಮತ್ತು ಟ್ರಂಪ್ ಕ್ರಮ :
ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ 6-3 ಬಹುಮತದೊಂದಿಗೆ ತೀರ್ಪು ನೀಡಿ, ಟ್ರಂಪ್ ಅವರು ಕಾಂಗ್ರೆಸ್ (ಅಮೆರಿಕದ ಸಂಸತ್ತು) ಅನುಮತಿಯಿಲ್ಲದೆ 1977 ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಶಕ್ತಿ ಕಾಯ್ದೆಯಡಿ ವಿಧಿಸಿರುವ ಸುಂಕಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದು ಹೇಳಿತ್ತು. ಸುಂಕ ವಿಧಿಸುವ ಅಧಿಕಾರ ಕೇವಲ ಅಮೆರಿಕದ ಕಾಂಗ್ರೆಸ್‌ಗೆ ಮಾತ್ರ ಇದೆಯೇ ಹೊರತು, ಅಧ್ಯಕ್ಷರಿಗಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು.
ಈ ತೀರ್ಪಿನ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಟ್ರಂಪ್ ಅವರು ಸೆಕ್ಷನ್ 122 ಅನ್ನು ಬಳಸಿಕೊಂಡು 150 ದಿನಗಳ ಅವಧಿಗೆ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.10 ರಷ್ಟು ಸುಂಕ ವಿಧಿಸಿರುವುದಾಗಿ ತಿಳಿಸಿದ್ದರು. ಈ ತಾತ್ಕಾಲಿಕ ಆಮದು ಸುಂಕವು ಫೆಬ್ರವರಿ 24 ರಿಂದ ಜಾರಿಗೆ ಬರಲಿದೆ. ಇದೀಗ ಅದನ್ನು ಶೇ. 15 ಕ್ಕೆ ಏರಿಸಲಾಗಿದೆ.
ಕೆಲವು ಸರಕುಗಳಿಗೆ ಸುಂಕದಿಂದ ವಿನಾಯಿತಿ ಇದೆ?
ವೈಟ್ ಹೌಸ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕೆಲವು ನಿರ್ದಿಷ್ಟ ಸರಕುಗಳಿಗೆ ಈ ತಾತ್ಕಾಲಿಕ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ:
* ಪ್ರಮುಖ ಖನಿಜಗಳು (Minerals).
* ಕರೆನ್ಸಿ ಮತ್ತು ಬುಲಿಯನ್‌ನಲ್ಲಿ ಬಳಸುವ ಲೋಹಗಳು.
* ಇಂಧನ ಮತ್ತು ಇಂಧನ ಉತ್ಪನ್ನಗಳು.
* ನೈಸರ್ಗಿಕ ಸಂಪನ್ಮೂಲಗಳು ಮತ್ತು ರಸಗೊಬ್ಬರಗಳು.
* ಕೆಲವು ಕೃಷಿ ಉತ್ಪನ್ನಗಳು.
* ಫಾರ್ಮಾಸ್ಯುಟಿಕಲ್ಸ್ ಮತ್ತು ಔಷಧೀಯ ಪದಾರ್ಥಗಳು.
* ಕೆಲವು ಎಲೆಕ್ಟ್ರಾನಿಕ್ಸ್ ಮತ್ತು ಪ್ರಯಾಣಿಕ ವಾಹನಗಳು.