ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೆ ತಂದಿದ್ದ ವಿವಾದಿತ 'ಜಾಗತಿಕ ಸುಂಕಗಳು' ಸಂವಿಧಾನ ಬಾಹಿರ ಎಂದು ಸ್ವತಃ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಅಧಿಕಾರವನ್ನು ಬಳಸಿಕೊಂಡು ಈ ಸುಂಕಗಳನ್ನು ಹೇರಿರುವುದು ಸರಿಯಲ್ಲ ಎಂದು ಅಲ್ಲಿನ ಸರ್ವೋಚ್ಚ ನ್ಯಾಯಾಲಯವೇ ಟ್ರಂಪ್ ಸರ್ಕಾರಕ್ಕೆ ಚಾಟಿ ಬೀಸಿದೆ. ಸುಪ್ರೀಂ ಕೋರ್ಟ್ ನಿನ್ನೆ ಶುಕ್ರವಾರ ನೀಡಿರುವ 6:3 ಬಹುಮತದ ತೀರ್ಪಿನಲ್ಲಿ ಟ್ರಂಪ್ ಅವರ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಅಧಿಕಾರದ ಬಳಕೆಯನ್ನು ತಳ್ಳಿಹಾಕಿದೆ. ನ್ಯಾಯಮೂರ್ತಿಗಳಾದ ಸ್ಯಾಮ್ಯುಯೆಲ್ ಅಲಿಟೊ, ಕ್ಲಾರೆನ್ಸ್ ಥಾಮಸ್ ಮತ್ತು ಬ್ರೆಟ್ ಕವನಾಗ್ ಅವರು ಈ ತೀರ್ಪಿನ ವಿರುದ್ಧ ಭಿನ್ನಮತ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಅವರ ಎರಡನೇ ಅವಧಿಯ ಅತ್ಯಂತ ವಿವಾದಾತ್ಮಕ ನಿರ್ಧಾರವೊಂದಕ್ಕೆ ಇದು ದೊಡ್ಡ ಹಿನ್ನಡೆಯಾಗಿದೆ.
International News
Trump Tariffs: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗೆ ಸ್ವತಃ ಅಮೆರಿಕದ ಸುಪ್ರೀಂ ಕೋರ್ಟ್ ಪೆಟ್ಟು ನೀಡಿದೆ.
- by Pramod
- FEBRUARY 21, 2026